
ಮುಳಬಾಗಿಲು: ತಾಲ್ಲೂಕಿನಲ್ಲಿ ಒಟ್ಟು 3005 ವಿದ್ಯಾರ್ಥಿಗಳಲ್ಲಿ 2181 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ತಾಲ್ಲೂಕು ಒಟ್ಟಾರೆ ಶೇಕಡಾ 72.57% ಫಲಿತಾಂಶವನ್ನು ಪಡೆದಿದೆ.
ಒಟ್ಟು 1489 ಮಂದಿ ಬಾಲಕರಲ್ಲಿ 992 ವಿದ್ಯಾರ್ಥಿಗಳು ಹಾಗೂ 1516 ವಿದ್ಯಾರ್ಥಿನಿಯರಲ್ಲಿ 1189 ಮಂದಿ ಉತ್ತೀರ್ಣರಾಗಿದ್ದಾರೆ.ಹಾಗೂ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ತಿಮ್ಮರಾವುತ್ತನಹಳ್ಳಿ, ಸರ್ಕಾರಿ ಪ್ರೌಢಶಾಲೆ ಹೆಬ್ಬಣಿ, ಮೊರಾರ್ಜಿ ಶಾಲೆ ಕೂತಾಂಡ್ಲಹಳ್ಳಿ, ಕಿತ್ತೂರು ರಾಣಿ ಚೆನ್ನಮ್ಮ ಶಾಲೆ ಕುರುಡುಮಲೆ, ಮೊರಾರ್ಜಿ ಶಾಲೆ ಘಟ್ಟು ವೆಂಕಟರಮಣ ಹಾಗೂ ಖಾಸಗಿ ಶಾಲೆಗಳಾದ ಮುಳಬಾಗಿಲು ಅಮರಜ್ಯೋತಿ ಶಾಲೆ, ಸಿಟಿಜನ್ ಶಾಲೆ ತಾಯಲೂರು ಹಾಗೂ ಸಾಯಿ ವಿದ್ಯಾಸಂಸ್ಥೆ ವಿ.ಗುಟ್ಟಹಳ್ಳಿ ಸೇರಿ ಒಟ್ಟು 8 ಶಾಲೆಗಳು ಶೇಕಡಾ 100% ರಷ್ಟು ಫಲಿತಾಂಶ ಪಡೆದಿವೆ.
ನಗರದ ಸೆಂಟ್ ಆನ್ಸ್ ಪ್ರೌಢಶಾಲೆಯ ಆಯೇಷಾ ಖಾನಂ 625/621 ಅಂಕಗಳನ್ನು ಪಡೆದು ತಾಲ್ಲೂಕಿಗೆ ಪ್ರಥಮ, ಜಿಲ್ಲೆಗೆ ದ್ವಿತೀಯ ಹಾಗೂ ರಾಜ್ಯದಲ್ಲಿ 5 ನೇ ರ್ಯಾಂಕ್ ಪಡೆದಿದ್ದಾರೆ. ಇದೇ ಶಾಲೆಯ ಜೆ . ಪೂರ್ಣವಿ 625/620 ಅಂಕಗಳೊಂದಿಗೆ ತಾಲೂಕಿನಲ್ಲಿ ದ್ವಿತೀಯ ಹಾಗೂ ಜಿಲ್ಲೆಯಲ್ಲಿ 3 ನೇ ಸ್ಥಾನ ಪಡೆದಿದ್ದಾರೆ ಹಾಗೂ ಮುಳಬಾಗಿಲು ನಗರದ ಅಮರಜ್ಯೋತಿ ಶಾಲೆಯ ಎಸ್.ಧನ್ಯ 625/619 ಅಂಕಗಳೊಂದಿಗೆ ತಾಲೂಕಿನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.