
oppo_2
ಮುಳಬಾಗಿಲು: ಗ್ರಾಮೀಣ ಮಹಿಳಾ ಒಕ್ಕೂಟ, ರೋಟರಿ ಸ್ಪಂದನಾ ಟ್ರಸ್ಟ್ ಹಾಗೂ ಇನ್ ಸೈಟ್ ಅಕಾಡೆಮಿ ಅವರ ಸಂಯುಕ್ತಾಶ್ರಯದಲ್ಲಿ ಶಾಲಾ ಮಕ್ಕಳ ಶಿಕ್ಷಣ, ಕಾನೂನು ಮತ್ತು ಹಕ್ಕುಗಳ ಒಂದು ದಿನದ ಕಾರ್ಯಾಗಾರದಲ್ಲಿ ಮಕ್ಕಳನ್ನುದ್ದೇಶಿಸಿ, ಶಿಕ್ಷಣ ಮತ್ತು ಅದರ ಮಹತ್ವದ ಬಗ್ಗೆ ತಾ. ಪಂ ಮಾಜಿ ಅಧ್ಯಕ್ಷ ಹಾಗೂ ವಕೀಲರಾದ ಎಂ ಎಸ್ ಶ್ರೀನಿವಾಸರೆಡ್ಡಿ ಮಾತನಾಡಿದರು.
ಶಿಕ್ಷಣ ಪ್ರತಿಯೊಬ್ಬ ವಿದ್ಯಾರ್ಥಿಗೆ ಬಹಳ ಅತ್ಯಮೂಲ್ಯವಾದದ್ದು, ಶಿಕ್ಷಣದಿಂದ ಪ್ರತಿಯೊಬ್ಬ ಮಕ್ಕಳು ಒಳ್ಳೆಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಮುಂದಿನ ದಿನಗಳಲ್ಲಿ ಸತ್ಪçಜೆಗಳಾಗಿ ಬಾಳಬೇಕು. ಪ್ರತಿಯೊಬ್ಬ ಮನುಷ್ಯನ ವ್ಯಕ್ತಿತ್ವವನ್ನು ರೂಪಿಸಬೇಕಾದರೆ ಮತ್ತು ಒಳ್ಳೆಯ ಮಾನಸಿಕ ವಿಕಾಸ ಆಗಬೇಕಾದರೆ ಮಕ್ಕಳಲ್ಲಿ ಗುಣಾತ್ಮಕವಾದಂತಹ ಶಿಕ್ಷಣ ಅಗತ್ಯ, ಮೌಲ್ಯಗಳಿಲ್ಲದ ಶಿಕ್ಷಣ ಯಾವತ್ತೂ ನಮ್ಮ ಪ್ರಯೋಜನಕ್ಕೆ ಬರುವುದಿಲ್ಲ. ಇದನ್ನರಿತು ಮಕ್ಕಳು ಒಳ್ಳೆಯ ಶಿಕ್ಷಣವನ್ನು ಪಡೆದು ಸಮಾಜಕ್ಕೆ ಪ್ರಯೋಜಕರಾಗಬೇಕು. ಮತ್ತು ಜೀವನದಲ್ಲಿ ಜನ್ಮ ಕೊಟ್ಟ ತಂದೆ ತಾಯಿಗಳನ್ನು ಮತ್ತು ವಿದ್ಯೆ ಕೊಟ್ಟ ಗುರುಗಳನ್ನು ಮರೆಯದಿರಿ. ಅವರು ನಿಮ್ಮ ಜೀವನದ ಆದರ್ಶಪ್ರಾಯ ವ್ಯಕ್ತಿಗಳು ಎಂದರು.
ಒಕ್ಕೂಟದ ಕಾರ್ಯದರ್ಶಿ ಪಾಪಮ್ಮ ಅವರು ಮಾತನಾಡಿ ಗ್ರಾಮೀಣ ಒಕ್ಕೂಟ ಸದಾ ಒಂದಲ್ಲ ಒಂದು ಜನಪರ ಕಾರ್ಯಕ್ರಮಗಳನ್ನು ಮಾಡುತ್ತಲೇ ಬಂದಿದೆ. ಮುಂದಿನ ದಿನಗಳಲ್ಲೂ ಹೆಚ್ಚು ಹೆಚ್ಚಿನ ಜನಪರ ಕಾರ್ಯಕ್ರಮಗಳನ್ನು ಮಾಡಿ ಒಂದು ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಶ್ರಮಿಸುತ್ತೇವೆ ಎಂದರು.
ಗ್ರಾಮೀಣ ಒಕ್ಕೂಟದ ಪುಷ್ಪಲತ ರವರು ಮಾತನಾಡಿ ಮನುಕುಲದಲ್ಲಿ ಹುಟ್ಟಿರುವ ನಾವು ಒಳ್ಳೆಯ ಸಮಾಜಮುಖಿ ಕೆಲಸಗಳನ್ನು ಮಾಡುವುದರ ಮೂಲಕ ಮತ್ತೊಬ್ಬರಿಗೆ ಆದರ್ಶಪ್ರಾಯವಾಗಿ ಒಳ್ಳೆಯ ಸತ್ಪçಜೆಗಳಾಗಿ ಹೊರಹೊಮ್ಮಿದಾಗ ನಮ್ಮ ಜೀವನದ ಸಾರ್ಥಕತೆ ಆಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮೀಣ ಒಕ್ಕೂಟದ ಲಕ್ಷö್ಮಮ್ಮ, ಸುನಂದಮ್ಮ, ಲಕ್ಷö್ಮಮ್ಮ, ಮತ್ತು ಇತರೆ ಪದಾಧಿಕಾರಿಗಳು ಹಾಜರಿದ್ದರು.