
filter: 0; fileterIntensity: 0.0; filterMask: 0; module: video; hw-remosaic: false; touch: (-1.0, -1.0); modeInfo: Beauty ; sceneMode: 0; cct_value: 5545; AI_Scene: (-1, -1); aec_lux: 99.608154; aec_lux_index: 0; hist255: 0.0; hist252~255: 0.0; hist0~15: 0.0; albedo: ; confidence: ; motionLevel: 0; weatherinfo: null; temperature: 49;
ಮುಳಬಾಗಿಲು: ನಗರದ ವಿವಿಧ ಬ್ಯಾಂಕ್ ಗಳ ಮುಂಭಾಗ ನಗರ ಪೊಲೀಸ್ ಠಾಣೆವತಿಯಿಂದ ಗ್ರಾಹಕರು ಮತ್ತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ಎಸ್ ಬಿಐ, ಕೆನರಾ ಬ್ಯಾಂಕ್, ಗ್ರಾಮೀಣಾಭಿವೃದ್ಧಿ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಸೇರಿದಂತೆ ಇತರೆ ಬ್ಯಾಂಕ್ ಗಳ ಮುಂಭಾಗ ಕರಪತ್ರ ವಿತರಿಸಿ ಹಾಗೂ ಆಟೋದಲ್ಲಿ ಧ್ವನಿವರ್ಧಕದ ಮೂಲಕ ನಗರ ಠಾಣೆ ಕ್ರೈಂ ಪಿಎಸ್ಐ ಮಂಜುನಾಥ್ ಮತ್ತು ಪೇದೆ ಬಾಬು ಅವರು ಗ್ರಾಹಕರು ಮತ್ತು ಸಾರ್ವಜನಿಕರು ಬ್ಯಾಂಕ್ ಮತ್ತು ಎಟಿಎಂನಿಂದ ಡ್ರಾ ಮಾಡುವಾಗ ಅಪರಿಚಿತರಿಗೆ ಪಿನ್ ನಂಬರ್ ಮತ್ತು ಎಟಿಎಂ ನೀಡಬೇಡಿ ಹಾಗೂ ಡ್ರಾ ಮಾಡಿದ ಹಣವನ್ನು ಜೋಪಾನವಾಗಿ ತೆಗೆದುಕೊಂಡು ಹೋಗಬೇಕು ಒಂದು ವೇಳೆ ಅಪರಿಚಿತರು ನಿಮ್ಮನ್ನು ಹಿಂಬಾಲಿಸಿದರೆ ಕೂಡಲೇ 112 ಗೆ ಕರೆ ಮಾಡಿ ಮಾಹಿತಿ ನೀಡಬೇಕು. ನಿಮ್ಮ ಸುತ್ತ ಮುತ್ತ ಅಪರಾಧ ನಡೆದ ಕೂಡಲೇ ಅಥವಾ ಅನುಮಾನ ಬಂದ ವ್ಯಕ್ತಿ ಕಂಡು ಬಂದಲ್ಲಿ ನಗರ ಪೊಲೀಸ್ ಠಾಣೆ ದೂ.08152242040 ಕರೆ ಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.