
ಮುಳಬಾಗಿಲು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಏರ್ಪಡಿಸಿರುವ ತಾಲ್ಲೂಕಿನ ಕೆ.ಬೈಯಪಹಳ್ಳಿ ಚುನಾವಣಾ ತನಿಖಾ ಠಾಣೆಯಲ್ಲಿ ಕಲ್ಲು ಬಂಡೆಗಳನ್ನು ಸಿಡಿಸಲು ಸಾಗಿಸುತ್ತಿದ್ದ ವಸ್ತುಗಳನ್ನು ತನಿಖಾ ಸಿಬ್ಬಂದಿ ವಶಕ್ಕೆ ಪಡೆದಿರುವ ಘಟನೆ ಭಾನುವಾರ ನಡೆದಿದೆ.
ಆಂದ್ರಪ್ರದೇಶ ಮದನಪಲ್ಲಿ ಮೂಲದ ಆಸೀಫ್ ಹಜರತ್ ಉಲ್ಲಾ ಎಂಬ ವ್ಯಕ್ತಿ ಕಾರು ಸಂಖ್ಯೆ ಎಪಿ 31,ಬಿಬಿ 1177 ಎಂಬ ಸಂಖ್ಯೆಯ ಕಾರಿನಲ್ಲಿ 1600 ಜಿಲೆಟನ್ ಕಡ್ಡಿಗಳನ್ನು, 7 ವಿದ್ಯುತ್ ತಂತಿಗಳ ಬಾಕ್ಸುಗಳನ್ನು ಹಾಗೂ 6 ಕಟ್ಟು ಡೆಟರ್ನೈಟ್ ಬಾಕ್ಸುಗಳನ್ನು ವಶಕ್ಕೆ ಪಡೆದಿದ್ದಾರೆ.
ಕೆ.ಬೈಯಪಹಳ್ಳಿ ತನಿಖಾ ಠಾಣೆಯಲ್ಲಿ ಎಂದಿನಂತೆ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಸ್ವಿಫ್ಟ್ ಕಾರನ್ನು ಪರಿಶೀಲನೆ ಮಾಡಿದಾಗ ಈ ವಸ್ತುಗಳು ಸಿಕ್ಕಿದ್ದು ಬೆಂಗಳೂರಿನಲ್ಲಿ ಜಿಲೆಟನ್ ಮತ್ತಿತರ ವಸ್ತುಗಳನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ಎಂದು ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಅರ್ಜುನ್ ಎಸ್.ಆರ್.ಗೌಡ ತಿಳಿಸಿದರು.
ಡಿ.ಎನ್.ಗೋಪಾಲ ಕೃಷ್ಣ, ವಿಶ್ವನಾಥ್, ಸುಬ್ರಮಣಿ ಹಾಗೂ ಹುಸೇನ್ ಎಂಬುವವರು ಚುನಾವಣಾ ತನಿಖಾ ಠಾಣೆಯಲ್ಲಿ ಕರ್ತವ್ಯದಲ್ಲಿದ್ದರು.