
ಮುಳಬಾಗಿಲು : ತಾಲೂಕಿನ ಮೋತಕಪಲ್ಲಿ ಗ್ರಾ.ಪಂ ವ್ಯಾಪ್ತಿಯ ಕೊಂಡಪಲ್ಲಿ ಗ್ರಾಮದ ಕಾಂಗ್ರೆಸ್ ಹಿರಿಯ ಮುಖಂಡ ಕೆ.ಎಂ.ವೆಂಕಟರಾಮರೆಡ್ಡಿ ರವರನ್ನು ಕೋಲಾರ ಜಿಲ್ಲಾ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.
ಕೆಪಿಸಿಸಿ ಮತ್ತು ಡಿಸಿಸಿ ಅಧ್ಯಕ್ಷರು ಇವರ ನೇಮಕವನ್ನು ಮಾಡಿ ಆದೇಶ ಹೊರಡಿಸಿದ್ದು ಪಕ್ಷ ಸಂಘಟನೆ ಜೊತೆಗೆ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಗೆಲುವಿಗೆ ಶ್ರಮಿಸಬೇಕೆಂದು ಸೂಚಿಸಿದ್ದಾರೆ.
ಈ ವೇಳೆ ಕೆ.ಎಂ.ವೆಂಕಟರಾಮರೆಡ್ಡಿ ಮಾತನಾಡಿ ನನಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮತ್ತು ಕೋಲಾರ ಶಾಸಕ ಕೊತ್ತೂರು ಜಿ ಮಂಜುನಾಥ್ ಮತ್ತು ಆದಿನಾರಾಯಣ ಅವರ ಸಹಕಾರದಿಂದ ರಾಜಕೀಯವಾಗಿ ಸ್ಥಾನಮಾನ ಸಿಕ್ಕಿದ್ದು ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.