
ಕೊಪ್ಪಳದ ಯುವ ಪ್ರತಿಭಾವಂತ ಮಹಾಂತೇಶ್ ಹಾನಗಲ್ ನಾಯಕತ್ವದ ಗದಗಿನ ಜಾನು ಪಂತರ ಕ್ರಿಕೆಟ್ ತಂಡವು ಸತತ ಎರಡು ಬಾರಿ ಯಶಸ್ಸಿನ ಆಟ ಆಡಿ ಈಗ ಮೂರನೇ ಬಾರಿ ಕೂಡ ಗೆಲ್ಲುವ ಮೂಲಕ ಕ್ರಿಕೆಟ್ ಲೋಕಕ್ಕೆ ಹೊಸ ಮೆರಗನ್ನು ತಂದಿದ್ದಾರೆ.
ಲೆಗ್‌ಸ್ಪಿನ್ನರ್ ಓಂಕಾರ ಕೇಸ್ತಿಯ (40 ಕ್ಕೆ 5 ವಿಕೆಟ್) ಅತ್ಯುತ್ತಮ ಬೌಲಿಂಗನಿಂದಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಧಾರವಾಡ ವಲಯ) ಆಶ್ರಯದ ಲೀಗ್ ಟೂರ್ನಿಯಲ್ಲಿ ನಗರದ ಜಾನೋಪಂತರ ಕ್ರಿಕೆಟ್ ಅಕಾಡೆಮಿಯು, ಹುಬ್ಬಳ್ಳಿಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿ ಸ್ಪೋರ್ಟ 23 ರನ್‌ಗಳಿಂದ ಸೋಲಿಸಿ ಲೀಗ್‌ನಲ್ಲಿ 3ನೇ ಗೆಲವು ಸಾಧಿಸಿತು.
ಗದಗ 92ನೇ ಡಿವಿಜನ್ ಜಿಮ್ಖಾನ ಕ್ಲಬ್‌ನ್ನುಟಾಸ್ ಗೆದ್ದು ಗದಗನ ಜಾನೋಪಂತರ ಅಕಾಡೆಮಿಯು, ಕಿರಣ ಡಿಗ್ಗೆ (39 ರನ್) ಪ್ರಲ್ಲಾದ ಕುಲಕರ್ಣಿ (37 ರನ್), ಆನಂದ ಗುಜ್ಜಳ (22 ರನ್) ಹಾಗೂ ಫೈರೋಜ ಸೌದಾಗರ ಬಾರಿಸಿದ 20 ರನ್‌ಗಳ ನೆರವಿನಿಂದ 46 ಓವರ್‌ಗಳಲ್ಲಿ 185 ರನ್‌ಗಳಿಗೆ ಆಲೌಟವಾಯಿತು. ಹುಬ್ಬಳ್ಳಿ ತಂಡದ ಪರ ಸಂತೋಷ ಈರಾಪೂರ, ಯಲ್ಲಪ್ಪ ಕಾಳಿ ತಲಾ 3 ವಿಕೆಟ್ ಪಡೆದರೆ, ಸುರೇಶಚಂದ್ರ ಕೊಣ್ಣೂರ 2 ವಿಕೆಟ್ ಪಡೆದು ಗದಗ ತಂಡವನ್ನು 185 ರನ್‌ಗಳಿಗೆ ನಿಯಂತ್ರಿಸಿದರು. ನಿಗದಿತ 50 ಓವರ್‌ಗಳಲ್ಲಿ ಗೆಲುವಿಗಾಗಿ 186 ರನ್‌ಗಳ ಗುರಿಯೊಂದಿಗೆ ಬ್ಯಾಟಿಂಗ್‌ಗೆ ಇಳಿದ ಸಿದ್ಧಾರೂಢಸ್ವಾಮಿ ಸ್ಪೋರ್ಟ್ಸ್ ಕ್ಲಬ್ ತಂಡಕ್ಕೆ ಆರಂಭಿಕ ಆಟಗಾರ ಅಭಿಷೇಕ ಸಫಾರೆ ಕೇವಲ 56 ಎಸೆತ್‌ಗಳಲ್ಲಿ 10 ಬೌಂಡರಿ, 1 ಸಿಕ್ಸರ್ ಸಹಿತ 62 ರನ್ ಬಾರಿಸಿ ಉತ್ತಮ ಆರಂಭ ನೀಡಿದರು. ಗದಗ ತಂಡದ ನಾಯಕ ಮಹಾಂತೇಶ ಹಾನಗಲ್ ಬೌಲಿಂಗ ದಾಳಿಗೆ ಇಳಿಯುತ್ತದ್ದಂತೆ ಅಭಿಷೇಕ ಸಫಾರೆ ಸೇರಿದಂತೆ ಸತತ ಮೂರು ವಿಕೆಟ್ ಪಡೆದು ಹುಬ್ಬಳ್ಳಿ ತಂಡಕ್ಕೆ ಆಘಾತ ನೀಡಿದರು. ಈ ಹಂತದಲ್ಲಿ ಬೌಲಿಂಗ ದಾಳಿ ನಡೆಸಿದ ಯುವ ಲೆಗ್‌ಸ್ಪಿನ್ನರ ಓಂಕಾರ ಕೇಸ್ತಿ 40 ರನ್‌ಗಳಿಗೆ 5 ವಿಕೆಟ್ ಪಡೆದು ಹುಬ್ಬಳ್ಳಿ ತಂಡ 46ನೇ ಓವರ್‌ನಲ್ಲಿ 162 ರನ್‌ಗಳಿಗೆ ಆಲೌಟವಾಗುವಂತೆ ನೋಡಿಕೊಂಡರು.
ಇವರಿಗೆ ಆನಂದ ಗುಜ್ಜಲ ಹಾಗೂ ಫೈರೋಜ ಸೌದಾಗರ ತಲಾ ಒಂದು ವಿಕೆಟ್ ಪಡೆದು ಉತ್ತಮ ಬೆಂಬಲ ನೀಡಿದರು. ಗದಗ ತಂಡದ ನಾಲ್ವರು ಆಟಗಾರರು ಅತ್ಯುತ್ತಮ ಕ್ಯಾಚ್‌ಗಳನ್ನು ಹಿಡಿದು ವಿಜಯದಲ್ಲಿ ಭಾಗಿಯಾದರು. ಜಯದಿ೦ದಾಗಿ ಗದಗ ತಂಡ 4 ಅಂಕ ಸಂಪಾದಿಸಿತು.