
ಕುಕನೂರು : ತಾಲೂಕಿನ ಇಟಗಿ ಸುಕ್ಷೇತ್ರದ ಶ್ರೀ ಮರಳಸಿದ್ದೇಶ್ವರ ಪುಣ್ಯಶ್ರಮ, ಕ್ಷೇಮಾಭಿವೃದ್ಧಿ ಸಂಘ ಆಶ್ರಯದಲ್ಲಿ ಶ್ರೀ ಶಿವಶರಣ ಗದ್ದಿಗೆಪ್ಪಜ್ಜನವರು ನೇತೃತ್ವದಲ್ಲಿ ಹಾಗೂ ಇನ್ನೂ ಅನೇಕ ಹರ-ಗುರು-ಚರ ಮೂರ್ತಿಗಳ ದಿವ್ಯ ಸಾನಿಧ್ಯದಲ್ಲಿ ಮಾರ್ಚ್ 8 ಶುಕ್ರವಾರ ರಂದು ಮಹಾಶಿವರಾತ್ರಿ ದಿವಸ ಬೆಳಗ್ಗೆ 5 ಗಂಟೆಗೆ ಶ್ರೀಮರುಳಸಿದ್ದೇಶ್ವರ ಸ್ವಾಮಿಗೆ ರುದ್ರಾಭಿಷೇಕ ಹಾಗೂ ಮಧ್ಯಾಹ್ನ 12.38 ಗಂಟೆಗೆ ಸಲ್ಲುವ ಅಭಿಜಿನ್ ಮುಹೂರ್ತದಲ್ಲಿ ಸರ್ವಧರ್ಮಗಳ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳಲಾಗಿದೆ.
ಸಾಮೂಹಿಕ ವಿವಾಹ : ಮರಳಸಿದ್ದೇಶ್ವರ ಪುಣ್ಯಶ್ರಮ ಕ್ಷೇಮಾಭಿವೃದ್ಧಿ ಸಂಘದ ದೂರವಾಣಿ ಸಂಖ್ಯೆ 9663881611, 9880992234, 9164524364 ವಧು-ವರರು ಹೆಸರನ್ನ ನೊಂದಾಯಿಸಿಕೊಳ್ಳಬೇಕು ಎಂದು ಮರಳ ಸಿದ್ದೇಶ್ವರ ಪುಣ್ಯಶ್ರಮದ ಶಿವಶರಣ ಗದ್ದಿಗೆಪಜ್ಜನವರು ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.