
ಮುಳಬಾಗಿಲು: ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳ ಸ್ಪರ್ಧ ಜಗತ್ತಿಗೆ ಅಣಿಯಾಗಬೇಕು. ಈ ನಿಟ್ಟಿನಲ್ಲಿ ಅವರ ಪ್ರತಿಭೆಯನ್ನು ಗುರುತಿಸಿ ಗೌರವಿಸುವ ಕೆಲಸ ಶಿಕ್ಷಕರು, ಪೋಷಕರಿಂದ ಆಗಬೇಕು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಅಧ್ಯಕ್ಷ ಜಿ. ಶ್ರೀನಿವಾಸ್ ಅಭಿಪ್ರಾಯಪಟ್ಟರು.
ನಗರದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ರಾಜ್ಯಮಟ್ಟದ ಶ್ರೀಮತಿ ಅನಿತಾ ಕೋಲ್ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಅಭಿನಂದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಸದಾ ಕಲಿಯುವ ಆಸಕ್ತಿ ಉಳ್ಳವರಾಗಬೇಕು, ಕಲಿಕೆಯ ಗುರಿ ಹೊಂದಿರುವುದರಿಂದ ಸಮಾಜದ ಉನ್ನತ ಸ್ಥಾನಗಳನ್ನು ಅಲಂಕರಿಸಲು ಸಾಧ್ಯ. ಹಾಗಾಗಿ ವಿದ್ಯಾರ್ಥಿಗಳು ಸ್ಪರ್ಧಾ ಜಗತ್ತಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.
ಪೋಷಕರು ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆಯನ್ನು ಅನ್ವೇಷಿಸಿ ಅವರಿಗೆ ಆಸಕ್ತಿ ಇರುವ ವಿಷಯಗಳಲ್ಲಿ ಅವರನ್ನು ಉತ್ತಮ ಪ್ರತಿಭೆಗಳನ್ನಾಗಿ ತಯಾರು ಮಾಡುವ ಪ್ರಾಮಾಣಿಕ ಪ್ರಯತ್ನದಲ್ಲಿ ತಾವು ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದರು.
ಮುಳಬಾಗಿಲು ತಾಲೂಕಿನ ಜ್ಞಾನ ವಿಜ್ಞಾನ ಸಮಿತಿಯು ಜಿಲ್ಲೆಗೆ ಮಾದರಿಯಾಗಿದ್ದು, ಸದಾ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಾ ವಿದ್ಯಾರ್ಥಿಗಳನ್ನು ವೈಜ್ಞಾನಿಕ ಮನೋಭಾವಗಳಿಗೆ ತೊಡಗಿಸಿಕೊಳ್ಳುವದ ಚಿಂತನೆ ನಡೆಸಿದೆ ಎಂದರು.
ಕ್ಷೇತ್ರ ಸಮನ್ವಯ ಅಧಿಕಾರಿ ಸೋಮೇಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ರಸಪ್ರಶ್ನೆ, ಪವಾಡ ರಹಸ್ಯ ವೈಜ್ಞಾನಿಕ ಪ್ರಯೋಗಗಳ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಪ್ರಯಾಣಿಕ ಪ್ರಯತ್ನ ಮಾಡಬೇಕು ಎಂದರು
ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಶ್ರೀಮತಿ ಅನಿತಾ ಕೌಲು ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಬಿ.ಚಿತ್ರ ಮತ್ತು ಚಿನ್ನಪ್ಪ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ತಾಲೂಕಿನ ನೂತನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್. ಜಗದೀಶ್ ಅವರನ್ನು ಸನ್ಮಾನಿಸಲಾಯಿತು.
ಜ್ಞಾನ-ವಿಜ್ಞಾನ ಸಮಿತಿಯ ತಾಲೂಕು ಅಧ್ಯಕ್ಷ ಕೆ.ಎನ್.ತಾಯಲೂರಪ್ಪ, ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ, ಖಜಾಂಚಿ ನಟರಾಜ್, ಪದಾಧಿಕಾರಿಗಳಾದ ಫಕ್ರುದ್ದೀನ್, ರಾಮಾಂಜಿ, ಬ್ರಹ್ಮಯ್ಯ, ಜಗನ್ನಾಥ್, ಕೆ ಬಿ ನಾಗರಾಜ್, ಸುರೇಂದ್ರ, ಕೆಎನ್ ಗೋವಿಂದ್ ಗೌಡ, ರಾಮಚಂದ್ರ, ಸುಬ್ರಮಣಿ, ಸುಗುಣ, ಪಾರ್ವತಮ್ಮ, ಸವಿತಾ ಕುಮಾರಿ, ಅನುರಾಧ, ಮಂಜುಳಾ, ರಾಮಮೂರ್ತಿ, ಕೆ.ವಿ.ಜಗನ್ನಾಥ, ಮುಕುಂದ, ಪ್ರೌಢಶಾಲಾ ಶಿಕ್ಷಕರಾದ ಗಣೇಶ್, ಅಪ್ಸರ್, ರಾಜಪ್ಪ, ಅನುಷಾ ಮತ್ತಿತರರು ಇದ್ದರು.