
ಮುಳಬಾಗಿಲು: ಪೋಷಕರು ಮತ್ತು ಸಾರ್ವಜನಿಕರು ಜಾಗೃತರಾಗಿ ಶಾಶ್ವತ ಅಂಗವಿಕಲತೆಯನ್ನು ತರಬಲ್ಲ ಪೊಲಿಯೋವನ್ನು ತಡೆಯಲು ಲಸಿಕೆ ಹಾಕಿಸಲು ಮುಂದಾಗಬೇಕೆಂದು ನಿವೃತ್ತ ಮುಖ್ಯ ಶಿಕ್ಷಕ ಕೆ. ಲಕ್ಷ್ಮಿನಾರಾಯಣ ಮನವಿ ಮಾಡಿದರು.
ತಾಲೂಕಿನ ಕನ್ನಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಮಗುವಿಗೆ ಪೋಲಿಯೋ ಹನಿ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾರ್ಚ್ 3 ರಿಂದ 6 ವರೆಗೆ ನಡೆಯುತ್ತಿದೆ. ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೂ ಪೋಲಿಯೊ ಹನಿ ಹಾಕಿಸುವ ಮೂಲಕ ಪೋಲಿಯೋ ನಿರ್ಮೂಲನೆ ಕೈ ಜೋಡಿಸಬೇಕು ಹಾಗೂ ನಾಲ್ಕು ದಿನಗಳವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದರು.
ವೈದ್ಯಾಧಿಕಾರಿ ಡಾ.ಸುಹೇಲ್, ಮುಖಂಡ ಶಾಮಪ್ರಸಾದ್, ಲಕ್ಷ್ಮಿ ಪ್ರಸಾದ್ , ಅಂಗನವಾಡಿ ಕಾರ್ಯಕರ್ತೆಯರಾದ ಮಂಜುಳಾ, ಕಾಂತಮ್ಮ, ಸೇರಿದಂತೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.