
ಮುಳಬಾಗಿಲು:ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕೆ ಎಚ್ ಮುನಿಯಪ್ಪ ಅವರ ಅಳಿಯ ಚಿಕ್ಕ ಪೆದ್ದಣ್ಣ ಅವರಿಗೆ ಬಿಟ್ಟು ಬೇರೆ ಯಾರಿಗೆ ಟಿಕೆಟ್
ಕೊಟ್ಟರು ಸೋಲು ಖಚಿತ ಎಂದು ಕೆಪಿಸಿಸಿ ಕಿಸಾನ್ ಖೇತ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಸಿ ಸುಭಾಷ್ ಚಂದ್ರಗೌಡ ಪತ್ರಿಕೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಇರುವುದರಿಂದ ಈಗಿನ ರಾಜಕೀಯ ಸನ್ನಿವೇಶದಲ್ಲಿ ಕೋಲಾರ ಜಿಲ್ಲೆಯಲ್ಲಿ ಪ್ರಬಲ ಆಕಾಂಕ್ಷಿ ಯಾದ ಚಿಕ್ಕ ಪೆದ್ದಣ್ಣ ಅವರನ್ನು ಕಣಕ್ಕಿಳಿಸಿದರೆ ಕಾಂಗ್ರೆಸ್ ಗೆಲುವು ಸುಲಭವಾಗಿರುತ್ತದೆ ಅದು ಬಿಟ್ಟು ಕೆಎಚ್ ಮುನಿಯಪ್ಪ ಅವರ ಮೇಲಿನ ದ್ವೇಷಕ್ಕಾಗಿ ಅವರನ್ನು ರಾಜಕೀಯವಾಗಿ ತುಳಿಯುವುದಕ್ಕಾಗಿ ಕೆಲವು ರಾಜಕೀಯ ನಾಯಕರು ಹುನ್ನಾರ ನಡೆಸುತ್ತಿದ್ದಾರೆ ಇದನ್ನು ಹೈಕಮಾಂಡ್ ಪರಿಗಣಿಸದೆ ಮತ್ತು ಕೋಲಾರ ಜಿಲ್ಲೆಯಲ್ಲಿ ಕೆ ಎಚ್ ಮುನಿಯಪ್ಪಗೆ ಒಂದು ದೊಡ್ಡ ಬಣವೆ ಇದೆ ಅದರ ಜೊತೆಗೆ ಕಾಂಗ್ರೆಸ್ ಪಕ್ಷ ಗಟ್ಟಿಯಾಗಿರುವುದರಿಂದ ಭಿನ್ನಮತಗಳನ್ನು ಬಿಟ್ಟು ಚಿಕ್ಕ ಪೆದ್ದಣ್ಣ ಅವರಿಗೆ ಟಿಕೆಟ್ ಕೊಟ್ಟರೆ ಗೆಲುವು ಖಚಿತ ಅದು ಬಿಟ್ಟು ಬೇರೆ ಜಿಲ್ಲೆಯ ಮೂರನೇ ವ್ಯಕ್ತಿಗೆ ಟಿಕೆಟ್ ನೀಡಿದರೆ ಖಂಡಿತವಾಗಿಯೂ ಸೋಲು ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.
ಕರ್ನಾಟಕ ರಾಜ್ಯಕ್ಕೆ ಮೂಡಲ ಬಾಗಿಲು ಆಗಿರುವುದರಿಂದ ಇಲ್ಲಿ ಪ್ರಬಲ ವ್ಯಕ್ತಿ ಸ್ಪರ್ಧಿಸಿ ಗೆಲುವು ಕಂಡರೆ ರಾಜ್ಯಕ್ಕೆ ಶುಭವಾಗಿ ಹೆಚ್ಚಿನ ಅಭ್ಯರ್ಥಿಗಳು ಗೆಲುವು ಕಾಣಬಹುದು ಎಂದು ತಿಳಿಸಿದರು.