April 20, 2025
ಮುಳಬಾಗಿಲು: ರೈತರಿಗೆ ಸ್ವಾಭಿಮಾನಿ ಬಿಕ್ಷೆ ನೀಡಿದ ಹಸಿರುಸೇನಾನಿ ಪ್ರೊ.ನಂಜುAಡಸ್ವಾಮಿ ಅವರ ೮೮ನೇ ಜನ್ಮದಿನಾಚರಣೆಯನ್ನು ರೈತಸಂಘದಿAದ ಪ್ರಗತಿಪರ ರೈತ ಪದ್ಮಘಟ್ಟ ಧರ್ಮ ಅವರ ತೋಟದಲ್ಲಿ ರೈತರಿಗೆ ಗಿಡ ವಿತರಣೆ ಮಾಡುವ ಮುಖಾಂತರ ಅರ್ಥಪೂರ್ಣವಾಗಿ ಆಚರಿಸಲಾಯಿತು.
ರೈತಕುಲದ ಉದ್ಧಾರಕ್ಕಾಗಿ ತಮ್ಮ ಇಡೀ ಜೀವನದಲ್ಲಿ ಹೋರಾಟ ಮಾಡಿದ ಮಹಾನ್ ರೈತ ನಾಯಕ ಪ್ರೊ.ನಂಜುAಡಸ್ವಾಮಿ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡುವ ಮುಖಾಂತರ ರೈತ ಹೋರಾಟದ ಗುರುಗಳಿಗೆ ಗೌರವ ನೀಡಬೇಕೆಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಕೇಂದ್ರ ಸರ್ಕಾರವನ್ನು ಕಾರ್ಯಕ್ರಮದಲ್ಲಿ ಒತ್ತಾಯ ಮಾಡಿದರು.
ಕೃಷಿ ಕ್ಷೇತ್ರದಲ್ಲಿ ಶೇ.೬೦ರಷ್ಟು ಉದ್ಯೋಗ ಸೃಷ್ಠಿ ಮಾಡುವ ರೈತರ ಮಕ್ಕಳನ್ನು ಮದುವೆಯಾಗದ ಪರಿಸ್ಥಿತಿಯಲ್ಲಿರುವಾಗ ಸರ್ಕಾರ ರೈತರ ಮಕ್ಕಳನ್ನು ಮದುವೆಯಾದರೆ ೫ ಲಕ್ಷ ಪ್ರೋತ್ಸಾಹಧನದ ಜೊತೆಗೆ ಸರ್ಕಾರಿ ಉದ್ಯೋಗದಲ್ಲಿ ಶೇ.೧೦ರಷ್ಟು ಉದ್ಯೋಗ ಮೀಸಲಿಡಬೇಕೆಂದು ಒತ್ತಾಯಿಸಿದರು.
ಭೂಸುಧಾರಣೆ ಕಾಯ್ದೆ, ಎಪಿಎಂಸಿ, ವಿದ್ಯುತ್‌ಶಕ್ತಿ ಕಾಯ್ದೆಗಳನ್ನು ಯಾವುದೇ ಷರತ್ತುಗಳು ಇಲ್ಲದೆ ಕೈಬಿಟ್ಟು ರೈತಪರ ಕೃಷಿ ಕ್ಷೇತ್ರ ಉಳಿವಿಗಾಗಿ ಸರ್ಕಾರ ಮುಂದಾಗುವ ಜೊತೆಗೆ ರಾಜ್ಯದಲ್ಲಿ ಬರ ಪರಿಹಾರ ವಿದ್ಯುತ್ ಸಮಸ್ಯೆ, ಹನಿ ನೀರಾವರಿ ಪದ್ಧತಿಯ ಅಜೀವ ಕಾಯ್ದೆ ಮತ್ತು ನಕಲಿ ಬಿತ್ತನೆ ಬೀಜ ಕೀಟನಾಶಕ ನಿಯಂತ್ರಣಕ್ಕೆ ಕಾನೂನು ಕಾಯ್ದೆ ಜಾರಿ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಅಧಿಕಾರಿಗಳ, ರಾಜಕಾರಣಿಗಳ ಮರ್ಜಿಯಲ್ಲಿ ತಗ್ಗಿ ಬಗ್ಗಿ ಗೂನು ಬೆನ್ನಾಗಿದ್ದ ರೈತನನ್ನು ನೆಟ್ಟಗೆ ನಿಲ್ಲಿಸಿ ಅವರಲ್ಲಿ ಆತ್ಮ ವಿಶ್ವಾಸ ತುಂಬಿ ದರ್ಪ ದಮನಗಳ ಎದುರು ಸೆಟೆದು ನಿಲ್ಲುವಂತೆ ರೈತರಿಗೆ ಆತ್ಮಗೌರವ ತಂದುಕೊಟ್ಟ ಪ್ರೊ.ನಂಜುAಡಸ್ವಾಮಿಯವರ ಆದರ್ಶಗಳನ್ನು ರೈತ ಕುಲಕ್ಕಾಗಿ ಸರ್ಕಾರಗಳು ಪಠ್ಯಪುಸ್ತಕದಲ್ಲಿ ಅಳವಡಿಸಬೇಕೆಂದು ಒತ್ತಾಯ ಮಾಡಿದರು.
ದುಬಾರಿಯಾಗುತ್ತಿರುವ ಕೃಷಿ ಕ್ಷೇತ್ರದಲ್ಲಿ ರೈತರು ರಾಸಾಯನಿಕ ಹಾಗೂ ಕಳೆ ಔಷಧಿಗಳನ್ನು ಬಳಸದಂತೆ ಪ್ರತಿಜ್ಞೆ ಮಾಡಿ ಸಾವಯವ ಕೃಷಿ ನಮ್ಮ ಹಕ್ಕು ನಮ್ಮ ಆರೋಗ್ಯ ರಕ್ಷಣೆ ಎಂದು ತಿಳುವಳಿಕೆ ಪಡೆಯದೇ ಇದ್ದರೆ ಇಡೀ ಕೃಷಿ ಕ್ಷೇತ್ರ ನಾಶವಾಗಿ ತುತ್ತು ಅನ್ನಕ್ಕಾಗಿ ಮತ್ತೆ ಮೂರನೇ ಮಹಾಯುದ್ಧ ನಡೆಯುವ ಕಾಲ ದೂರವಿಲ್ಲವೆಂದು ಭವಿಷ್ಯ ನುಡಿದರು.
ಪ್ರಗತಿಪರ ರೈತ ಧರ್ಮ ಮಾತನಾಡಿ, ದುಡಿಯುವವರ ಹಾಗೂ ದೇಶವನ್ನು ಲೂಟಿ ಮಾಡುತ್ತಿರುವ ದಂಧೆಕೋರರ ನಡುವಿನ ಹೋರಾಟ ಕೃಷಿ ಕ್ಷೇತ್ರ ಮಾಡುವ ಗ್ರಾಮೀಣ ಪ್ರದೇಶದ ರೈತರಿಂದಲೇ ಪ್ರಾರಂಭವಾಗಲಿದೆ. ಕೃಷಿ ಕ್ಷೇತ್ರ ಉಳಿಯಬೇಕು ಕೃಷಿ ಮಾಡುವ ರೈತ ಮಕ್ಕಳಿಗೆ ಹೆಣ್ಣು ಕೊಡದ ಅವ್ಯವಸ್ಥೆ ವಿರುದ್ಧ ಯುವ ರೈತರು ತಿರುಗಿನೋಡುವಂತೆ ಬದುಕುವ ಛಲ ಹೊಂದಬೇಕೆAದು ಕಾರ್ಯಕ್ರಮದಲ್ಲಿ ಯುವ ರೈತರಿಗೆ ಸಲಹೆ ನೀಡಿದರು.
ನೇಗಿಲ ಕುಲದೊಳಗಡಗಿದೆ ಕರ್ಮ, ನೇಗಿಲ ಮೇಲೆಯೆ ನಿಂತಿದೆ ಧರ್ಮ ಬಾರ್ ಕೋಲ್ ಏರಿದ ಎದೆ, ರುಮಾಲು ಸುತ್ತಿದ ತಲೆ ಯಾರಿಗೂ ಬಾಗುವುದಿಲ್ಲ ಎಂಬ ರೈತರಿಗೆ ಸ್ವಾಭಿಮಾನದ ಬದುಕನ್ನು ಹೇಳಿಕೊಟ್ಟ ರೈತರ ಅನ್ನ ಕಿತ್ತುಕೊಳ್ಳಲು ಬಂದಿದ್ದ ಅದೆಷ್ಟೋ ಬಹುರಾಷ್ಟಿçÃಯ ಕಂಪನಿಗಳಿಗೆ ಭಾರತಕ್ಕೆ ಕಾಲಿಡಲು ಬಿಡದ ತಮ್ಮದೇ ಶೈಲಿಯಲ್ಲಿ ಬಾರ್‌ಕೋಲ್ ಚಳುವಳಿ, ಸಗಣಿ ಚಳುವಳಿ, ಮೆಟ್ಟಿನ ಚಳುವಳಿ ಮಾಡುವ ಮೂಲಕ ಆಳುವವರ ಹಾದಿ ತಪ್ಪದ ಹಾಗೆ ನೋಡಿಕೊಂಡ ಧೀಮಂತ ನಾಯಕನ ಪ್ರಭಾವ ಹೇಗಿತ್ತು ಎಂದರೆ ಪ್ರತಿ ಹಳ್ಳಿಯಲ್ಲೂ ಸರ್ಕಾರಿ ನೌಕರರು ಹಳ್ಳಿಗೆ ಕಾಲಿಡುವ ಮೊದಲು ರೈತರ ಅನುಮತಿ ಪಡೆದುಕೊಳ್ಳಬೇಕೆಂದು ಹಳ್ಳಿಗಳಲ್ಲಿ ನಾಮಫಲಕ ಹಾಕಿದ ನಂಜುAಡಸ್ವಾಮಿ ಹೋರಾಟದ ಪ್ರತಿರೂಪ ಸಮರ್ಥ ನಾಯಕ ಬೇಕಾದ ಅನಿವಾರ್ಯತೆ ಇದೆ ಎಂದು ಭವಿಷ್ಯ ನುಡಿದರು.
ಕಾರ್ಯಕ್ರಮದಲ್ಲಿ ಗಿರೀಶ್, ಶೈಲಜ, ರತ್ನಮ್ಮ, ಮುನಿರತ್ನಮ್ಮ, ಸೌಭಾಗ್ಯಮ್ಮ, ವೆಂಕಟಮ್ಮ, ಲಕ್ಷಿö್ಮದೇವಿ ಮುಂತಾದವರಿದ್ದರು.

Leave a Reply

Your email address will not be published. Required fields are marked *

error: Content is protected !!