
ಮುಳಬಾಗಿಲು: ತಾಲೂಕಿನ ಆವಣಿ ಗ್ರಾಮದ ಸೀತಾ ಪಾರ್ವತಿ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಆದಿಜಾಂಬವಂತ ದೇವಾಲಯದ ಆವರಣದಲ್ಲಿ ಮಾರ್ಚ್ ೪ ರಂದು ಶ್ರೀ ಆದಿಜಾಂಭವ ಮಠದ ಸೇವಾ ಟ್ರಸ್ಟ್ ವತಿಯಿಂದ ಮಾದಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಪಿ.ಎಂ. ಚಿಕ್ಕವೆಂಕಟಸ್ವಾಮಿ, ಕಾರ್ಯದರ್ಶಿ ಎಂ.ಆರ್. ಚಂದ್ರಪ್ಪ ತಿಳಿಸಿದ್ದಾರೆ.
ಮಾರ್ಚ್ ೪ ರಂದು ಶ್ರೀ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವಕ್ಕೆ ಮುಂಚಿತವಾಗಿ ಪ್ರತಿವರ್ಷದಂತೆ ಈ ವರ್ಷವೂ ನಡೆಯುವ ಶ್ರೀ ಆದಿಜಾಂಭವಂತ ದೇವರಿಗೆ ಪ್ರಥಮ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಅದೇ ದಿನ ಮಾದಿಗ ಸಮುದಾಯದ ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಪದವಿಯಲ್ಲಿ ಶೇ ೭೫% ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
೨೦೨೨-೨೩ನೇ ಸಾಲಿನ ಅಂಕಪಟ್ಟಿ, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರದೊಂದಿಗೆ ಪೋಷಕರ ವಿಳಾಸ ಅರ್ಜಿಯೊಂದಿಗೆ ಭರ್ತಿಮಾಡಿ ಅಂಚೆ ಅಥವಾ ಖುದ್ದಾಗಿ ಅರ್ಜಿಗಳನ್ನು ಫೆಬ್ರವರಿ ೨೮ ರೊಳಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಲು ಕೊರಲಾಗಿದೆ ಆರ್. ಹನುಮಪ್ಪ ಬಿನ್ ಪೂಜಾರಿ ರಾಮಪ್ಪ ಕೊಟಾಕ್ ಮಹೇಂದ್ರ ಬ್ಯಾಂಕ್ ಸಮೀಪ ಮೊ : ೯೬೮೬೫೪೨೬೫೩, ಎಂ.ಆರ್. ಚಂದ್ರಪ್ಪ ಮೋ : ೯೨೪೧೧೧೧೨೪೩ ಸಂಖ್ಯೆಗಳಿಗೆ ಸಂಪರ್ಕಿಸಲು ಕೋರಿದ್ದಾರೆ.