
- ಮುಳಬಾಗಿಲು: ತಾಲೂಕಿನ ಸರ್ವಾಂಗಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನಕ್ಕಾಗಿ ಸರ್ಕಾರದ ಜೊತೆ ಜಗಳ ಮಾಡಿ ಅನುದಾನವನ್ನು ತರುತ್ತೇನೆಂದು ಶಾಸಕ ಸಮೃದ್ಧಿ ಮಂಜುನಾಥ್ ತಿಳಿಸಿದರು.
ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಸಮೀಪದ ಮುದಿಗೆರೆ ಗ್ರಾಮದಲ್ಲಿ 15 ಲಕ್ಷರೂ ವೆಚ್ಚದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ತಾಲೂಕಿನಾದ್ಯಂತ 5 ಕಡೆಗಳಲ್ಲಿ ಕೊಲದೇವಿ, ಜಿ.ಮಾರಂಡಹಳ್ಳಿ, ಕಸುವರೆಡ್ಡಹಳ್ಳಿ, ಮುದಿಗೆರೆ, ರಾಮಸಂದ್ರ ಗ್ರಾಮಗಳಲ್ಲಿ ಭವನಗಳ ಕಾಮಗಾರಿಗಳನ್ನು ಶ್ರೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ತಾಲೂಕಿನ 25 ಕಡೆ ಇದೇ ರೀತಿ ಅಂಬೇಡ್ಕರ್ ಸಮುದಾಯ ಭಾವನೆಗಳನ್ನು ನಿರ್ಮಿಸಿ ಕೊಡಲಾಗುವುದೆಂದು ಹೇಳಿದರು. ಫೆಬ್ರವರಿ 28 ಕ್ಕೆ ಕೆಜಿಎಫ್ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸುವ ಜೊತೆಗೆ ಲೋಕಸಭಾ ಚುನಾವಣಾ ನೀತಿ ಸಂಹಿತೆ ದಿನಾಂಕ ನಿಗದಿ ಆಗುವ ಒಳಗೆ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ತಿಳಿಸಿದರು.
ನಿಗದಿತ ಅವಧಿಯೊಳಗೆ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಗುತ್ತಿಗೆದಾರ ವೆಂಕಟೇಶ್ ರೆಡ್ಡಿಗೆ ತಾಕೀತು ಮಾಡಿದರು.
ಜಿ.ಪಂ ಮಾಜಿ ಸದಸ್ಯ ಬಿ.ವಿ.ಸಾಮೇಗೌಡ, ನಗವಾರ ಎನ್ ಆರ್ ಸತ್ಯಣ್ಣ, ಸಂಪತ್, ನಂಗಲಿಕಿಶೋರ್ ಇದ್ದ
ರು.