ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೇಟ್ ಧರಿಸಿ ವಾಹನ ಸಂಚಾರದಲ್ಲಿ ತೊಡಗಿಸಿಕೊಂಡು ಸುರಕ್ಷತೆ ಕಾಪಾಡಿಕೊಳ್ಳಬೇಕೆಂದು ಎಪಿಎಂಸಿ ಮಾಜಿ ನಿರ್ದೇಶಕ ನಗವಾರ ಎನ್.ಆರ್. ಸತ್ಯಣ್ಣ ತಿಳಿಸಿದ್ದಾರೆ.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೋಲಾರದ ಎಸ್‌ಎನ್‌ಆರ್ ಆಸ್ಪತ್ರೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದ ವಿದ್ಯಾರ್ಥಿಗಳಿಗೆ ಉಚಿತವಾಗಿ ಹೆಲ್ಮ್ಟ್‌ಗಳನ್ನು ವಿತರಿಸಿ ಮಾತನಾಡಿದರು.
ನರಸಿಂಹತೀರ್ಥದ ಬಳಿ ನಡೆದ ರಸ್ತೆ ಅಫಘಾತದಲ್ಲಿ ಹೆಲ್ಮ್ಟ್ ಧರಿಸದೇ ಅಫಘಾತಕ್ಕೆ ಈಡಾದ ಯುವಕನ್ನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದನ್ನು ಕಣ್ಣಾರೆ ನೋಡಿದ ನನಗೆ ಆಘಾತವಾಗಿ ಅಫಘಾತಗಳಲ್ಲಿ ಜನ ಸಾಯಬಾರದು ಎಂದು ಸ್ವಂತ ಖರ್ಚಿನಿಂದ ಹೆಲ್ಮ್ಟ್‌ಗಳನ್ನು ಖರೀದಿಸಿ ಕಾಲೇಜು ವಿದ್ಯಾರ್ಥಿಗಳಿಗೆ ನೀಡಿದ್ದೇನೆಂದು ತಿಳಿಸಿದರಲ್ಲದೆ ತಾಲೂಕಿನಲ್ಲಿ ಯಲ್ಲೇ ರಕ್ತದಾನ ಶಿಬಿರಗಳು ನಡೆದರೂ ನಾನು ಉಚಿತವಾಗಿ ಹೆಲ್ಮ್ಟ್‌ಗಳನ್ನು ನೀಡುತ್ತೇನೆಂದು ಘೋಷಿಸಿದರು.
ಪ್ರಾಂಶುಪಾಲ ಜಿ. ಮುನಿವೆಂಕಟಪ್ಪ, ಉತ್ತನೂರು ಅರುಣ್ ಕುಮಾರ್, ಉಪನ್ಯಾಸಕರಾದ ಉಮೇಶ್, ಮೋಹನ್‌ರೆಡ್ಡಿ, ಕೃಷ್ಣಪ್ಪ, ಡಾ. ಎಂ.ಎನ್. ಮೂರ್ತಿ, ಟಿ.ಎಸ್. ಶ್ರೀನಿವಾಸ್, ನಂಗಲಿ ಕೆ.ತ್ಯಾಗರಾಜ್ ಇದ್ದರು.